ಎಫ್‌ಕೆಸಿಸಿಐ ಪತ್ರಿಕಾ ಪ್ರಕಟಣೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಸರ್ಕಾರದಲ್ಲಿ ಬಾಕಿ ಉಳಿದಿರುವ ವೇತನ ಪರಿಷ್ಕರಣೆ ಪ್ರಸ್ತಾವನೆಯ ಬೇಡಿಕೆಗಳ ಕುರಿತು ಗುರುವಾರ, 16ನೇ ಮಾರ್ಚ್ 2023 ರಿಂದ ಕೆಪಿಟಿಸಿಎಲ್ ಮತ್ತು ಎಸ್ಕಾಂ ನ ನೌಕರರು ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಕರೆ ಬಗ್ಗೆ ಕನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಎಫ್ ಕೆ ಸಿ ಸಿ ಐ) ಕಳವಳ ವ್ಯಕ್ತಪಡಿಸಿದೆ.

ಈ ಹಂತದಲ್ಲಿ ನೌಕರರ ಮುಷ್ಕರವು ಕೈಗಾರಿಕೆಗಳು ಮತ್ತು ವ್ಯಾಪಾರ ವಲಯಗಳ ಕಾರ್ಯನಿರ್ವಹಣೆ ಮತ್ತು ಚಾಲನೆಗೆ ಬೇಕಾದ ವಿದ್ಯುತ್ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೈಗಾರಿಕಾ ವಲಯದಲ್ಲಿನ ಉತ್ಪಾದನೆ ಮತ್ತು ತಯಾರಿಕೆಯಲ್ಲೂ ಪರಿಣಾಮ ಉಂಟಾಗಲಿದೆ, ವಿಶೇಷವಾಗಿ ಎಂಎಸ್ಎಂಇ ವಲಯವು ಎಸ್ಕಾಂ ನಿಂದ ರಾಜ್ಯ ಪವರ್‌ ಗ್ರಿಡ್‌ ಮೂಲಕ ಸರಬರಾಜು ಮಾಡುವ ವಿದ್ಯುತ್‌ನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರ ಜೊತೆಗೆ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳ ಮೇಲೆ ಸಹ ಪರಿಣಾಮ ಬೀರಬಹುದು.

ಯಾವುದೇ ವಿದ್ಯುತ್ ವ್ಯತ್ಯಯವಾಗುವುದಿಲ್ಲ ಎಂದು ನೌಕರರ ಸಂಘವು ಭರವಸೆ ನೀಡಿದ್ದರೂ, ದಿನದಿಂದ ದಿನಕ್ಕೆ ವಿದ್ಯುತ್ ಸರಬರಾಜಿನಲ್ಲಿ ಉದ್ಭವಿಸುವ ವಿವಿಧ ದೂರುಗಳನ್ನು ಪರಿಹರಿಸಲು ವಿದ್ಯುತ್ ಸಿಬ್ಬಂದಿ ಲಭ್ಯವಿರುವುದಿಲ್ಲ ಮತ್ತು ಯಾವುದೇ ರೀತಿಯ ದೋಷಗಳು ಗಮನಕ್ಕೆ ಬರುವುದಿಲ್ಲ.

ಗ್ರಾಹಕರು, ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರ ವಲಯಗಳ ಹಿತದೃಷ್ಟಿಯಿಂದ, ಈ ವೇತನ ಪರಿಷ್ಕರಣೆ ಸಮಸ್ಯೆಯನ್ನು ಕೆಪಿಟಿಸಿಎಲ್ ಹಾಗೂ ಎಸ್ಕಾಂನ ನೌಕರರು ಸರ್ಕಾರದೊಂದಿಗೆ ಚರ್ಚಿಸಬೇಕು ಮತ್ತು ಯಾವುದೇ ಮುಷ್ಕರವನ್ನು ತಪ್ಪಿಸಬೇಕು ಎಂದು ಎಫ್‌ಕೆಸಿಸಿಐ ಸೂಚಿಸುತ್ತದೆ.

ಇದು ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಹೂಡಿಕೆದಾರರಿಗೆ ತಪ್ಪು ಸಂದೇಶವನ್ನು ನೀಡುತ್ತದೆ.

ಬಿ.ವಿ.ಗೋಪಾಲ್ ರೆಡ್ಡಿ
ಅಧ್ಯಕ್ಷರು
ಎಫ್‌ಕೆಸಿಸಿಐ

Social Share