ಇಂದು ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ – 2025ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಎಂ.ಜಿ.ಬಾಲಕೃ಼ಷ್ಷ, ಅಧ್ಯಕ್ಷರು, ಎಫ್. ಕೆ. ಸಿ.ಸಿ.ಐ ರವರು ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಶ್ರೀ ಡಿ.ಕೆ.ಶಿವಕುಮಾರ್, ಸನ್ಮಾನ್ಯ ಉಪಮುಖ್ಯಮಂತ್ರಿ, ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ, ಮಾನ್ಯ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗದ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ, ರವರು ಉದ್ಘಾಟಿಸಿದರು. ಜಾರ್ಖಂಡ್‍ನ ಪಶುಸಂಗೋಪನೆ ಮತ್ತು ಸಹಕಾರ ಇಲಾಖೆ ಸಚಿವೆ ಶ್ರೀಮತಿ ಶಿಲ್ಪಿ ನೇಹಾ ಟಿರ್ಕಿ, ಅರುಣಾಚಲ ಪ್ರದೇಶ, ಪದುಚೇರಿ ಕೃಷಿ ಸಚಿವರು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ್. ಬಿ.ಎಸ್, ಸೇರಿದಂತೆ ಹಿರಿಯ ಗಣ್ಯರು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025ರ ಮೇಳದಲ್ಲಿ ಜರ್ಮನಿ, ಸ್ವಿಟ್ಜರ್‍ಲ್ಯಾಂಡ್, ಸ್ಪೈನ್, ಆಸ್ಟ್ರೇಲಿಯಾ, ಕೀನ್ಯಾ, ತಾಂಜೇನಿಯ, ಇಟಲಿ, ಇಂಗ್ಲೇಂಡ್, ಪೆರು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 8 ಹೊರ ರಾಜ್ಯಗಳ ಕೃಷಿ ಸಚಿವರು, 300 ಕ್ಕೂ ಹೆಚ್ಚು ಮಳಿಗೆಗಳು, ಹೊರ ರಾಜ್ಯಗಳು 17 ಇಲಾಖೆಗಳು 7 ಸಂಸ್ಥೆಗಳು ಭಾಗವಹಿಸಿದ್ದಾರೆ.
ಇದೇ ಸಂರ್ಭದಲ್ಲಿ ರೂ. 20 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ “ಸಾವಯವ ಮತ್ತು ಸಿರಿಧಾನ್ಯ ಹಬ್”(ಮಿಲೇಟ್ ಹಬ್)ಗೆ ಸನ್ಮಾನ್ಯ ಮುಖ್ಯ ಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿ, ಕೃಷಿ ಇಲಾಖೆಯ “ಶತ ಸಂಭ್ರಮ” ಸ್ವಾವಲಂಭನೆಯಿಂದ ಸಮೃದ್ಧಿಯಡೆಗೆ ಪುಸ್ತಕವನ್ನು ಬಿಡುಗಡೆ ಮಾಡಿದರು.



