ಎಫ್‌ಕೆಸಿಸಿ‌ಐ ವತಿಯಿಂದ “ಕನ್ನಡ ರಾಜ್ಯೋತ್ಸವ" ಮತ್ತು "ಕರ್ನಾಟಕ ಹೆಮ್ಮೆ” ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನ

14nov3:00 pmಎಫ್‌ಕೆಸಿಸಿ‌ಐ ವತಿಯಿಂದ “ಕನ್ನಡ ರಾಜ್ಯೋತ್ಸವ" ಮತ್ತು "ಕರ್ನಾಟಕ ಹೆಮ್ಮೆ” ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನ

Event Details

ಮಾನ್ಯ ಸದಸ್ಯರೇ,

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಶುಭಾಶಯಗಳು

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಇದೇ ಶುಕ್ರವಾರ ದಿನಾಂಕ 14ನೇ ನವೆಂಬರ್ 2025, ಸಮಯ: 3.30ಕ್ಕೆ, ಸ್ಥಳ: ಸರ್‌ ಎಂ ವಿ ಆಡಿಟೋರಿಯಂ, ಎಫ್‌ ಕೆ ಸಿ ಸಿ ಐ, ಕೆ ಜಿ ರಸ್ತೆ, ಬೆಂಗಳೂರು ಇಲ್ಲಿ  ಕನ್ನಡ ರಾಜ್ಯೋತ್ಸವ ಸಮಾರಂಭ ವನ್ನು ಆಯೋಜಿಸಿದ್ದು, ಸನ್ಮಾನ್ಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಈ ಸಮಾರಂಭದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅನನ್ಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ  ಎಫ್‌ ಕೆ ಸಿ ಸಿ ಐ ವತಿಯಿಂದ “ಕರ್ನಾಟಕ ಹೆಮ್ಮೆ ”ಯ ಪ್ರಶಸ್ತಿ  ಪ್ರದಾನ ಮಾಡುತ್ತಿದ್ದೇವೆ.

ಈ ಐತಿಹಾಸಿಕ ಸಮಾರಂಭಕ್ಕೆ  ತಾವುಗಳು ತಮ್ಮ ಕುಟುಂಬ ಸಮೇತರಾಗಿ, ಸ್ನೇಹಿತರು, ಹಾಗೂ ಹಿತೈಷಿಗಳೊಂದಿಗೆ ಭಾಗವಹಿಸ ಬೇಕೆಂದು ಕೇಳಿ ಕೋಳ್ಳುತ್ತಿದ್ದೇನೆ.
ಬನ್ನಿ ಕನ್ನಡದ ಹಬ್ಬವನ್ನು ನಾವು ನೀವು ಸೇರಿ ಒಟ್ಟಾಗಿ  ಆಚರಿಸೋಣ.

ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಲಾಗಿದೆ.

ಧನ್ಯವಾದಗಳೊಂದಿಗೆ,

ಇಂತಿ ತಮ್ಮ ವಿಶ್ವಾಸಿ

ಉಮಾ ರೆಡ್ಡಿ
ಅಧ್ಯಕ್ಷರು, ಎಫ್‌ ಕೆ ಸಿ ಸಿ ಐ

Time

November 14, 2025 3:00 pm(GMT+00:00)