ಶ್ರೀ ಎಚ್ ಕೆ ಪಾಟೀಲ್ ಸನ್ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಕರ್ನಾಟಕ ಸರ್ಕಾರ ಇವರು ಎಫ್ ಕೆ ಸಿ ಸಿ ಐ ಕಳೆದ ಬಾರಿ ಆಯೋಜಿಸಿದ್ದ ದಕ್ಷಿಣ ಭಾರತ ಉತ್ಸವ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತಿವಹಿಸಿ ಎಫ್ ಕೆ ಸಿ ಸಿ ಐ ಮತ್ತು ಪ್ರವಾಸೋದ್ಯಮ ಇಲಾಖೆಯೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದ್ದ ಹೂಡಿಕೆದಾರರೊಂದಿಗೆ ಸಭೆ ನಡೆಸಿದರು.
ಈ ಸಭೆಯಲ್ಲಿ ಸನ್ಮಾನ್ಯ ಸಚಿವರು ಹೂಡಿಕೆದಾರರಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು, ಸಹಕಾರ ನೀಡುತ್ತೇವೆ ಮತ್ತು ಯೋಜನೆಗಳು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು
ಈ ಸಭೆಯ ಅಧ್ಯಕ್ಷತೆಯನ್ನು ಎಫ್ ಕೆ ಸಿ ಸಿ ಐ ಅಧ್ಯಕ್ಷರಾದ ಶ್ರೀ ಎಮ್ ಜಿ ಬಾಲಕೃಷ್ಣರವರು ವಹಿಸಿದ್ದರು.
ಕೆ ಎಸ್ ಟಿ ಡಿ ಸಿ ನ ಅಧ್ಯಕ್ಷರಾದ ಶ್ರೀ ಎಂ ಶ್ರೀನಿವಾಸ್, ಶ್ರೀಮತಿ ಸಲ್ಮಾ ಕೆ ಫ಼ಾಹಿಮ್, ಐಎಎಸ್ ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ ಡಾ. ಕೆ ವಿ ರಾಜೇಂದ್ರ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಶ್ರೀಮತಿ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷರು, ಶ್ರೀ ಟಿ ಸಾಯಿ ರಾಮ್ ಪ್ರಸಾದ್, ಉಪಾಧ್ಯಕ್ಷರು, ಶ್ರೀ ಕೆ ಶಿವ ಷಣ್ಮುಗಂ, ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರು, ಪ್ರವಾಸೋದ್ಯಮ ಸಮಿತಿ ಎಫ್ ಕೆ ಸಿ ಸಿ ಐ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
