ಎಫ್‍ಕೆಸಿಸಿಐನಿಂದ ತೇಜಸ್ವಿನಿ ಅನಂತಕುಮಾರ್ ಗೆ ಪ್ರಶಸ್ತಿ

ಎಫ್‍ಕೆಸಿಸಿಐನಿಂದ ತೇಜಸ್ವಿನಿ ಅನಂತಕುಮಾರ್ ಗೆ ಪ್ರಶಸ್ತಿ

ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದು, ಅವರಿಗೆ ಅಗತ್ಯ ಪ್ರೋತ್ಸಾಹ, ಪ್ರತಿಭೆಗೆ ತಕ್ಕ ಅವಕಾಶ ನೀಡುವ ಕಾರ್ಯ ಆಗಬೇಕು ಎಂದು ಅದಮ್ಯ ಚೇತನ ಸಂಸ್ಥಾಪಕಿ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಪ್ರತಿಪಾದಿಸಿದರು.

ಗುರುವಾರ ಅಂತರರಾಷ್ಟೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಪ್ರದಾನ ಮಾಡಿದ ‘ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಇಸ್ರೋ ಸ್ಯಾಟ್‍ಕಾಂ ಯೋಜನೆ ಮಾಜಿ ನಿರ್ದೇಶಕಿ ಡಾ. ಟಿ.ಕೆ ಅನುರಾಧ ಮಾತನಾಡಿದರು. ಭಾರತೀಯ ವಾಯುಪಡೆಯ ಪೈಲಟ್ ಸ್ನೇಹಾ ಶೇಖಾವತ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂತರರಾಷ್ಟೀಯ ಮಹಿಳಾ ದಿನದ ಅಂಗವಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಫೌಂಡೇಷನ್ ಅಧ್ಯಕ್ಷೆ ಮತ್ತು ಸಹ ಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಬಿ.ವಿ ಗೋಪಾಲ್ ರೆಡ್ಡಿ, ಅಧ್ಯಕ್ಷರು, ಎಫ್‍ಕೆಸಿಸಿಐ, ಶ್ರೀ ರಮೇಶ್ ಚಂದ್ರ ಲಹೋಟಿ, ಹಿರಿಯ ಉಪಾಧ್ಯಕ್ಷರು, ಎಫ್‍ಕೆಸಿಸಿಐ, ಮಹಿಳಾ ಉದ್ಯಮಗಳ ಸಮಿತಿಯ ಅಧ್ಯಕ್ಷೆ ಶ್ರೀಮತಿ ಉಮಾ ರೆಡ್ಡಿ, , ಇಸ್ರೋ ಸ್ಯಾಟ್‍ಕಾಂ ಯೋಜನೆಯ ಮಾಜಿ ನಿರ್ದೇಶಕಿ ಡಾ. ಟಿ.ಕೆ ಅನುರಾಧ, ಬಿಜೆಪಿ ಮುಖಂಡ ಶ್ರೀ ಭಾಸ್ಕರ್ ರಾವ್, ಐಎಎಫ್ ವಿಂಗ್ ಕಮಾಂಡರ್ ಸ್ನೇಹಾ ಶೇಖಾವತ್ , ಶ್ರೀ ಕೆ. ಲಕ್ಷಣ್, ಸಲಹೆಗಾರರು, ಮಹಿಳಾ ಉದ್ಯಮಿಗಳ ಸಮಿತಿ, ಎಫ್‍ಕೆಸಿಸಿಐ, ಮಾಜಿ ಅಧ್ಯಕ್ಷ ಡಾ. ಐ.ಎಸ್ ಪ್ರಸಾದ್, ಎಫ್‍ಕೆಸಿಸಿಐ , ಹಾಗೂ ಶ್ರೀ ಮದನ್ ಪದಕಿ, ಸಂಸ್ಥಾಪಕರು, ಟೈ ಸಂಸ್ಥೆ, ಮೈಕ್ರೋಸಾಫ್ಟ್ ಇಂಡಿಯಾದ ಸಿಒಒ ಐರಿಯಾ ಗೋಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Social Share