ಕೌಶಲ ಮತ್ತು ಅಕೌಶಲ ನೌಕರರಿಗೆ ಹೈಕೋರ್ಟ್ ಮಾರ್ಗಸೂಚಿ ಪ್ರಕಾರ ಕನಿಷ್ಟ ವೇತನವನ್ನು ನಿಗಧಿಪಡಿಸುವ ಬಗ್ಗೆ ಸಭೆಯಲ್ಲಿ ವಿಸೃತವಾಗಿ ಚರ್ಚೆ ನಡೆಸಿದರು.

ಕನಿಷ್ಟ ವೇತನ ನಿಗಧಿ ಸಂಬಂಧ ವಿವಿಧ ಕಾರ್ಖಾನೆಗಳ ಆಡಳಿತ ವರ್ಗದವರ ಜೊತೆ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಸಭೆ ನಡೆಸಿದರು.

ಕೌಶಲ ಮತ್ತು ಅಕೌಶಲ ನೌಕರರಿಗೆ ಹೈಕೋರ್ಟ್ ಮಾರ್ಗಸೂಚಿ ಪ್ರಕಾರ ಕನಿಷ್ಟ ವೇತನವನ್ನು ನಿಗಧಿಪಡಿಸುವ ಬಗ್ಗೆ ಸಭೆಯಲ್ಲಿ ವಿಸೃತವಾಗಿ ಚರ್ಚೆ ನಡೆಸಿದರು.

ಶ್ರೀ ರಮೇಶ್ ಚಂದ್ರ ಲಹೋಟಿ, ಅಧ್ಯಕ್ಷರು, ಎಫ್‍ಕೆಸಿಸಿಐ ಇವರು ಮಾತನಾಡುತ್ತಾ ಕನಿಷ್ಟ ವೇತನ ನಿಗಧಿಪಡಿಸುವ ಮುನ್ನ ಕಾರ್ಖಾನೆಗಳ ಆಡಳಿತ ವರ್ಗದವರ ಜೊತೆ ಮಾತುಕತೆ ನಡೆಸಬೇಕಿತ್ತು ಹಾಗೂ ಈ ಮಾರ್ಗಸೂಚಿಯು ಅವೈಜ್ಞಾನಿಕವಾಗಿದ್ದು, ಈ ಆದೇಶದಿಂದ ಮಾಲೀಕರಿಗೆ ತುಂಬ ತೊಂದರೆ ಆಗುತ್ತದೆ ಎನ್ನುವುದನ್ನ ಸಚಿವರಿಗೆ ಮನವರಿಕೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಮಾತನಾಡುತ್ತ ಈ ಕಾಯಿದೆಯ ವಿರುದ್ಧ ಅರ್ಜಿ ಸಲ್ಲಿಸುವುದಾಗಿ ಹೇಳಿದರು ಹಾಗೂ ಇತರೆ ಸಂಘ-ಸಂಸ್ಥೆಗಳಿಗೂ ಸಲ್ಲಿಸುವಂತೆ ವಿನಂತಿಸಿದರು. ನ್ಯಾಯಾಲಯದ ತೀರ್ಪು ಬರುವವರೆಗೂ ತಮ್ಮ ನಿರ್ಧಾರವನ್ನು ತಡೆಹಿಡಿಯುವಂತೆ ಸಚಿವರಿಗೆ ಹೇಳಿದರು. ಇದರ ವಿರುದ್ದ ಕರ್ನಾಟಕ ಸರ್ಕಾರವು ಹೈ ಕೋರ್ಟ್‍ಗೆ ಮನವಿ ಸಲ್ಲಿಸಬೇಕೆಂದು ತಿಳಿಸಿದರು. ಇದಕ್ಕೆ ಸಚಿವರು ಉತ್ತರಿಸುತ್ತಾ ಕರ್ನಾಟಕ ಸರ್ಕಾರವು ಯಾವುದೇ ಕಾರಣಕ್ಕೂ ಮನವಿ ಸಲ್ಲಿಸುವುದಿಲ್ಲ. ಕಾರ್ಖಾನೆಗಳ ಆಡಳಿತ ವರ್ಗದವರು ಬೇಕಾದರೆ ದಾವೆ ಹೂಡಿ ಎಂದು ಹೇಳಿದರು. ಹಾಗೂ ಈ ಸಭೆಯಲ್ಲಿ ಆಡಳಿತ ವರ್ಗದ ನಾಯಕರಿಂದ ವ್ಯಕ್ತವಾದ ಅನೇಕ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಈ ಸಭೆಯಲ್ಲಿ ಪ್ರಮುಖ ಆಡಳಿತ ವರ್ಗದ ಸಂಘಟನೆಗಳಾದ ಎಫ್‍ಕೆಸಿಸಿಐ, ಕಾಸಿಯಾ, ಪೀಣ್ಯ ಕೈಗಾರಿಕಾ ಸಂಘ, ಕರ್ನಾಟಕ ಎಂಪ್ಲಾಯರ್ ಅಸೋಸಿಯೇಷನ್, ಹೋಟೆಲ್‍ಗಳ ಸಂಘ, ಬೆಂಗಳೂರು ಎಂಪ್ಲಾಯರ್ ಅಸೋಸಿಯೇಷನ್, ಇನ್ನಿತರ ಸಂಘಟನಾ ಪ್ರಮುಖರು ಭಾಗವಹಿಸಿದ್ದರು.

Social Share