
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಯ ಅಧ್ಯಕ್ಷರಾದ ಶ್ರೀ. ಪೆರಿಕಲ್ ಎಂ. ಸುಂದರ್, ರವರು ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ಈ ಕೆಳಕಂಡ ಅಹವಾಲುಗಳನ್ನು ಸನ್ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್.ಟಿ. ಸೋಮಶೇಖರ್, ರವರ ಗಮನಕ್ಕೆ ತಂದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಇಂದು ಶ್ರೀ ಎಸ್.ಟಿ. ಸೋಮಶೇಖರ್, ಸನ್ಮಾನ್ಯ ಸಹಕಾರ ಸಚಿವರು ಮತ್ತು ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಯ ಅಧ್ಯಕ್ಷರಾದ ಶ್ರೀ. ಪೆರಿಕಲ್ ಎಂ. ಸುಂದರ್, ರವರು ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ಈ ಕೆಳಕಂಡ ಅಹವಾಲುಗಳನ್ನು ಸನ್ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್.ಟಿ. ಸೋಮಶೇಖರ್, ರವರ ಗಮನಕ್ಕೆ ತಂದರು.
•ಕರ್ನಾಟಕ ಸರ್ಕಾರ ದಿನಾಂಕ: 04-08-2020 ರಂದು ಹೊರಡಿಸಿದ ಆದೇಶದಂತೆ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು 0.35% ಗೆ ನಿಗಧಿ ಮಾಡುವುದು ಹಾಗೂ ದಿನಾಂಕ: 15-12-2020 ರಂದು ಹೊರಡಿಸಿದ ಆದೇಶವನ್ನು ರದ್ದು ಮಾಡುವುದು.
• ಎಪಿಎಂಸಿ ಪ್ರಾಂಗಣದ ಹೊರಗಡೆಯ ವ್ಯಾಪಾರಸ್ಥರಿಗೂ ಸಹ 0.35% ಮಾರುಕಟ್ಟೆ ನಿಗಧಿ ಮಾಡಿ ಎರಡು ಮಾರುಕಟ್ಟೆಯಲ್ಲಿ (ಪ್ರಾಂಗಣದ ಒಳಗೆ ಮತ್ತು ಹೊರಗೆ) ವ್ಯಾಪಾರ ಮಾಡುವ ವರ್ತಕರಿಗೆ ನ್ಯಾಯಯುತ ಮತ್ತು ಸಮಾನಾಂತರ ವಾತಾವರಣ ಕಲ್ಪಿಸುವುದು.
•ಇಲ್ಲವೆ ಪ್ರಾಂಗಣದ ಒಳಗೆ ಮತ್ತು ಹೊರಗೆ ವ್ಯಾಪಾರ ಮಾಡುವವರಿಗೆ ಇರುವ ಮಾರುಕಟ್ಟೆ ಶುಲ್ಕವನ್ನು ನಿರ್ಮೂಲನೆ ಮಾಡುವುದು.
•ಸರ್ಕಾರ ಈ ತಿದ್ದುಪಡಿಯನ್ನು ಮಾಡುವುದರಿಂದ ಆದಾಯ ಬರುತ್ತದೆ ಎಂದು ತಿಳಿದು ಮಾಡಿರುತ್ತದೆ. ಇದು ತಪ್ಪು ಕಲ್ಪನೆ. ಸರ್ಕಾರವು ಪ್ರಾಂಗಣದ ಹೊರಗಡೆಯ ವ್ಯಾಪಾರಸ್ಥರಿಗೂ ಸಹ 0.35% ಮಾರುಕಟ್ಟೆ ಶುಲ್ಕ ನಿಗಧಿ ಮಾಡಿದಲ್ಲಿ ಸರ್ಕಾರ ಯೋಚನೆ ಮಾಡಿದ್ದಕ್ಕಿಂತ ಎರಡರಷ್ಟು ಆದಾಯ ತರುತ್ತದೆ ಎಂಬ ಭರವಸೆ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ನೀಡುತ್ತಿದ್ದೇವೆ.
ಶ್ರೀ ಎಸ್.ಟಿ. ಸೋಮಶೇಖರ್, ರವರು ಎಲ್ಲಾ ಎಪಿಎಂಸಿ ವರ್ತಕರ ಅಹವಾಲನ್ನು ಸಮಾಧಾನದಿಂದ ಆಲಿಸಿ ತಮ್ಮ ಭಾಷಣದಲ್ಲಿ ಮಾತನಾಡುತ್ತಾ ದಿನಾಂಕ: 28-12-2020 ರಂದು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ವಿಷಯ ಚರ್ಚೆಗೆ ಬರುವುದಾಗಿ ಎಂದು ತಿಳಿಸಿದರು.
ಇಲ್ಲಿಯವರೆಗೆ ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಯ ವರ್ತಕರ ತಮ್ಮನ್ನು ಭೇಟಿ ಹಾಗೂ ಪತ್ರದ ಮುಖಾಂತರ ಎಫ್ಕೆಸಿಸಿಐ ಮೇಲೆ ತಿಳಿಸದಂತ ಎಲ್ಲಾ ವಿಷಯಗಳನ್ನು ನನ್ನ ಗಮನಕ್ಕೆ ತಂದಿರುತ್ತಾರೆ. ಈ ಎಲ್ಲಾ ವಿಚಾರಗಳನ್ನು ನಾನು ದಿನಾಂಕ: 28-12-2020 ರಂದು ನಡೆಯುವ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ವರ್ತಕರ ಭರವಸೆಯನ್ನು ಈಡೇರಿಸಿ ತಮಗೆ ಸಂತೋಷದ ಸುದ್ಧಿಯನ್ನು ನೀಡುತ್ತೇನೆ ಎಂಬ ಆಶ್ವಾಸನೆ ನೀಡಿದರು.
ನಂತರ ಎಲ್ಲಾ ಎಪಿಎಂಸಿ ವರ್ತಕರು ಚರ್ಚೆ ನಡೆಸಿ ದಿನಾಂಕ: 28-12-2020 ನಡೆಯುವ ಕ್ಯಾಬಿನೆಟ್ನ ನಿರ್ಣಯವನ್ನು ಗಮನಿಸಿ ತಮ್ಮ ಮುಂದಿನ ಹೋರಾಟದ ರೂಪರೇಷೆಗಳನ್ನು ನಿರ್ಧರಿಸುವ ನಿರ್ಣಯವನ್ನು ತೆಗೆದುಕೊಂಡರು.



